• Episode 5 | Your Attention Plate | English
    Oct 18 2026

    What if your attention were a lunch plate (thali)? Imagine your attention as a plate with limited space. Every thought, notification, worry, conversation, and ambition asks for a place on it. But if we try to accommodate everything, do we leave enough room for what truly matters? In Episode 5 of The Simplified Scholar, Dr. Brian Jeevan Fernandes explores the importance of choosing where we direct our attention. Through a familiar everyday metaphor, we reflect on distraction, priorities, meaningful living, and the small choices that shape our days. Perhaps a fulfilling life is not about giving everything our attention, but about giving the right things the attention they deserve. Join me as we simplify this powerful idea and discover how to make room for what matters most. The Simplified Scholar — Big Ideas. Made Simple.

    Mostra di più Mostra meno
    15 min
  • Episode 5 | ನಿಮ್ಮ ಗಮನವೇ ಒಂದು ತಟ್ಟೆ! | Kannada
    Oct 18 2026

    ನಿಮ್ಮ ಗಮನವನ್ನು ಒಂದು ಊಟದ ತಟ್ಟೆಯಂತೆ ಕಲ್ಪಿಸಿಕೊಳ್ಳಿ. ಆ ತಟ್ಟೆಯಲ್ಲಿ ಪ್ರತಿಯೊಂದು ಆಲೋಚನೆಗೂ, ಚಿಂತೆಯಿಗೂ, ಮೊಬೈಲ್ ಸೂಚನೆಗೂ, ಆಸೆಗೂ ಮತ್ತು ಜವಾಬ್ದಾರಿಗೂ ಜಾಗ ಬೇಕು. ಆದರೆ ಎಲ್ಲವನ್ನೂ ಒಂದೇ ತಟ್ಟೆಯಲ್ಲಿ ತುಂಬಿಸಲು ಪ್ರಯತ್ನಿಸಿದರೆ, ನಿಜವಾಗಿಯೂ ಮುಖ್ಯವಾದುದಕ್ಕೆ ಜಾಗ ಉಳಿಯುತ್ತದೆಯೇ? The Simplified Scholarನ ಐದನೇ ಸಂಚಿಕೆಯಲ್ಲಿ, ಡಾ. ಬ್ರಿಯಾನ್ ಜೀವನ್ ಫೆರ್ನಾಂಡಿಸ್ ಅವರು ನಮ್ಮ ಗಮನವನ್ನು ಎಲ್ಲಿ ಮತ್ತು ಹೇಗೆ ಬಳಸುತ್ತೇವೆ ಎಂಬುದರ ಮಹತ್ವವನ್ನು ಸರಳವಾಗಿ ಅನಾವರಣಗೊಳಿಸುತ್ತಾರೆ. ದಿನನಿತ್ಯದ ಪರಿಚಿತ ಅನುಭವದ ಮೂಲಕ, ನಮ್ಮನ್ನು ಚಂಚಲಗೊಳಿಸುವ ಸಂಗತಿಗಳು, ನಮ್ಮ ಆದ್ಯತೆಗಳು ಮತ್ತು ಬದುಕಿಗೆ ನಿಜವಾದ ಅರ್ಥ ನೀಡುವ ವಿಷಯಗಳ ಕುರಿತು ಚಿಂತಿಸಲು ಈ ಸಂಚಿಕೆ ನಿಮ್ಮನ್ನು ಆಹ್ವಾನಿಸುತ್ತದೆ. ಬದುಕು ಎಂದರೆ ಎಲ್ಲದಕ್ಕೂ ಗಮನ ಕೊಡುವುದಲ್ಲ; ಮುಖ್ಯವಾದುದಕ್ಕೆ ಮನಪೂರ್ವಕವಾಗಿ ಗಮನ ನೀಡುವುದೂ ಹೌದು. ನಿಮ್ಮ ಗಮನದ ತಟ್ಟೆಯಲ್ಲಿ ಯಾವುದಕ್ಕೆ ಜಾಗ ನೀಡಬೇಕು ಎಂಬುದನ್ನು ಒಮ್ಮೆ ಯೋಚಿಸೋಣ. The Simplified Scholar — Big Ideas. Made Simple.

    Mostra di più Mostra meno
    18 min
  • Episode 4 - FLOW — When You Forget the Clock I English
    Oct 10 2026

    Have you ever been so absorbed in something that you completely forgot about time?

    Perhaps you were reading a fascinating book, creating something with your hands, solving a challenging problem, or simply doing something you deeply enjoy. You looked at the clock, only to discover that an hour had passed like a few fleeting minutes.

    What happens to us in those moments?

    Psychologists call this beautiful state of deep absorption Flow — a state in which our attention becomes so completely immersed in an activity that the noise of the world seems to fade away.

    In this episode, we explore the science and simplicity of Flow: why it happens, how the right balance between challenge and skill draws us into it, and how we can invite more of these meaningful moments into our everyday lives.

    We also discover how Flow connects with the Japanese philosophy of Ikigai — finding meaning and purpose in the things we do.

    You don't need to escape your everyday life to experience something extraordinary. Sometimes, all you need is to give one meaningful activity your undivided attention.

    The Simplified Scholar — Big Ideas. Made Simple.

    Listen, reflect, and discover the extraordinary hidden within the ordinary.

    Mostra di più Mostra meno
    12 min
  • Episode 4 - ಪ್ರವಾಹ ಸ್ಥಿತಿ — ಸಮಯವೇ ಮರೆಯಾಗುವ ಕ್ಷಣ I Kannada
    Oct 10 2026

    ನೀವು ಯಾವುದಾದರೂ ಕೆಲಸದಲ್ಲಿ ಎಷ್ಟು ತಲ್ಲೀನರಾಗಿದ್ದೀರೆಂದರೆ, ಸಮಯ ಕಳೆಯುತ್ತಿರುವುದೇ ನಿಮಗೆ ತಿಳಿಯದ ಕ್ಷಣಗಳನ್ನು ಎಂದಾದರೂ ಅನುಭವಿಸಿದ್ದೀರಾ?

    ಮನಸ್ಸಿಗೆ ಮೆಚ್ಚಿನ ಪುಸ್ತಕವನ್ನು ಓದುತ್ತಿರಬಹುದು, ಏನನ್ನಾದರೂ ಸೃಷ್ಟಿಸುತ್ತಿರಬಹುದು, ಒಂದು ಸವಾಲಿನ ಸಮಸ್ಯೆಗೆ ಪರಿಹಾರ ಹುಡುಕುತ್ತಿರಬಹುದು… ಹೀಗೆ ಯಾವುದೋ ಒಂದು ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿರುವಾಗ, ಗಡಿಯಾರದ ಮುಳ್ಳುಗಳು ಚಲಿಸುತ್ತಿದ್ದರೂ ನಮ್ಮ ಅರಿವಿಗೆ ಬರುವುದು ತಡವಾಗುತ್ತದೆ.

    ಅಂತಹ ಕ್ಷಣಗಳಲ್ಲಿ ನಮ್ಮ ಮನಸ್ಸಿನಲ್ಲಿ ಏನಾಗುತ್ತಿರುತ್ತದೆ?

    ಮನೋವಿಜ್ಞಾನದಲ್ಲಿ ಈ ಸ್ಥಿತಿಯನ್ನು ‘ಪ್ರವಾಹ ಸ್ಥಿತಿ’ (Flow) ಎಂದು ಕರೆಯುತ್ತಾರೆ. ನಾವು ಮಾಡುತ್ತಿರುವ ಕೆಲಸದಲ್ಲಿ ಮನಸ್ಸು ಸಂಪೂರ್ಣವಾಗಿ ಒಂದಾಗುವಾಗ, ಹೊರಗಿನ ಗದ್ದಲವೂ ಮನದೊಳಗಿನ ಚಂಚಲತೆಯೂ ನಿಧಾನವಾಗಿ ಮರೆಯಾಗುತ್ತವೆ. ಉಳಿಯುವುದು ಆ ಕ್ಷಣ, ಆ ಕೆಲಸ, ಮತ್ತು ಅದರಲ್ಲಿ ತೊಡಗಿರುವ ನಮ್ಮ ಸಂಪೂರ್ಣ ಅಸ್ತಿತ್ವ.

    ಈ ಸಂಚಿಕೆಯಲ್ಲಿ, ಪ್ರವಾಹ ಸ್ಥಿತಿಯ ಹಿಂದಿರುವ ಮನೋವಿಜ್ಞಾನವನ್ನು ಸರಳವಾಗಿ ಅರಿಯೋಣ. ನಮ್ಮ ಸಾಮರ್ಥ್ಯಕ್ಕೆ ಸವಾಲೊಡ್ಡುವ, ಆದರೆ ನಮ್ಮನ್ನು ಕುಗ್ಗಿಸದ ಕೆಲಸಗಳು ಹೇಗೆ ನಮ್ಮನ್ನು ಆಳವಾದ ತಲ್ಲೀನತೆಯತ್ತ ಕರೆದೊಯ್ಯುತ್ತವೆ ಎಂಬುದನ್ನು ತಿಳಿಯೋಣ.

    ಜೊತೆಗೆ, ನಾವು ಮಾಡುವ ಕೆಲಸಗಳಲ್ಲಿ ಅರ್ಥವನ್ನೂ ಸಂತೋಷವನ್ನೂ ಕಂಡುಕೊಳ್ಳುವ ಜಪಾನಿನ ‘ಇಕಿಗೈ’ (Ikigai) ತತ್ತ್ವದೊಂದಿಗೆ ಈ ಅನುಭವಕ್ಕಿರುವ ಸುಂದರ ಸಂಬಂಧವನ್ನೂ ಅನ್ವೇಷಿಸೋಣ.

    ಇದಕ್ಕಾಗಿ ಬದುಕಿನಿಂದ ದೂರ ಹೋಗಬೇಕಿಲ್ಲ. ಕೆಲವೊಮ್ಮೆ, ನಾವು ಮಾಡುತ್ತಿರುವ ಒಂದು ಅರ್ಥಪೂರ್ಣ ಕೆಲಸಕ್ಕೆ ನಮ್ಮ ಸಂಪೂರ್ಣ ಗಮನವನ್ನು ನೀಡಿದರೆ ಸಾಕು.

    ಕೆಲವು ಕ್ಷಣಗಳಲ್ಲಿ ಅಷ್ಟು ಆಳವಾಗಿ ಬದುಕುವುದು — ಕಾಲವನ್ನೇ ಎಣಿಸುವುದನ್ನು ಮರೆತುಬಿಡುವಷ್ಟು!

    ದಿ ಸಿಂಪ್ಲಿಫೈಡ್ ಸ್ಕಾಲರ್ — ದೊಡ್ಡ ವಿಚಾರಗಳು, ಸರಳವಾಗಿ.

    ಆಲಿಸಿ, ಆಲೋಚಿಸಿ, ಸಾಮಾನ್ಯ ಕ್ಷಣಗಳೊಳಗೆ ಅಡಗಿರುವ ಅಸಾಮಾನ್ಯತೆಯನ್ನು ಕಂಡುಕೊಳ್ಳಿ.

    Mostra di più Mostra meno
    12 min
  • ಸಂಚಿಕೆ 3 - ಸಣ್ಣ ಸಣ್ಣ ಸಂಗತಿಗಳಿಂದ ಅರಳುವ ಅರ್ಥಪೂರ್ಣ ಬದುಕು I Kannada
    Oct 3 2026

    ನಮ್ಮ ಬದುಕು ಬದಲಾಗಬೇಕೆಂದರೆ, ಯಾವುದೋ ಒಂದು ದೊಡ್ಡ ನಿರ್ಧಾರ ಬೇಕು, ಮಹತ್ತರವಾದ ಹೆಜ್ಜೆಯೊಂದು ಬೇಕು, ಅಥವಾ ಜೀವನವನ್ನೇ ಬದಲಿಸಿಬಿಡುವಂತಹ ಒಂದು ಹೊಸ ಆರಂಭ ಬೇಕು ಎಂದು ನಾವು ಅನೇಕ ಬಾರಿ ಭಾವಿಸುತ್ತೇವೆ.

    ಆದರೆ, ಬಹುಶಃ ಸುಂದರವಾದ ಬದುಕು ದೊಡ್ಡ ಕ್ಷಣಗಳಲ್ಲಿ ನಿರ್ಮಾಣವಾಗುವುದಿಲ್ಲ.

    ಅದು ನಿಶ್ಶಬ್ದವಾಗಿ, ನಮಗೆ ಅರಿವಾಗದ ರೀತಿಯಲ್ಲಿ, ಪ್ರತಿದಿನದ ಒಂದೊಂದು ಸಣ್ಣ ಕ್ಷಣದಿಂದ ಹೆಣೆಯಲ್ಪಡುತ್ತಿರಬಹುದು.

    ದಿ ಸಿಂಪ್ಲಿಫೈಡ್ ಸ್ಕಾಲರ್ನ ಈ ಸಂಚಿಕೆಯಲ್ಲಿ, Ikigaiಯ ಲೋಕದೊಳಗೆ ಮತ್ತಷ್ಟು ಆಳವಾಗಿ ಹೆಜ್ಜೆಯಿಟ್ಟು, ನಮ್ಮ ದಿನಗಳನ್ನು ಅರ್ಥಪೂರ್ಣವಾಗಿಸುವ ಆ ಸಣ್ಣ ಸಣ್ಣ ಸಂಗತಿಗಳ ಮೌನಶಕ್ತಿಯನ್ನು ಅರಿಯುವ ಪ್ರಯತ್ನ ಮಾಡೋಣ.

    ಬೆಳಗಿನ ಒಂದು ನಡಿಗೆ. ಮನಸ್ಸಿಗೆ ಮುದ ನೀಡುವ ಒಂದು ಆತ್ಮೀಯ ಮಾತುಕತೆ. ಹೃದಯಕ್ಕೆ ಹತ್ತಿರವಾದ ಒಂದು ಹಾಡು. ಅವಸರವಿಲ್ಲದೆ ಸವಿಯುವ ಒಂದು ಊಟ. ಸಮಯದ ಅರಿವನ್ನೇ ಮರೆಸುವ ಒಂದು ಹವ್ಯಾಸ. ಯಾರಿಗಾದರೂ ಮಾಡುವ ಒಂದು ಸಣ್ಣ ಸಹಾಯ. ಅಥವಾ, ನಾಳೆಯನ್ನು ಎದುರುನೋಡುವಂತೆ ಮಾಡುವ ಒಂದು ಪುಟ್ಟ ಕಾರಣ.

    ಇವುಗಳಲ್ಲಿ ಯಾವುದೂ ಪ್ರತ್ಯೇಕವಾಗಿ ನೋಡಿದಾಗ ಅಸಾಧಾರಣವೆನಿಸದೇ ಇರಬಹುದು.

    ಆದರೆ, ವರ್ಷಗಳು ಉರುಳಿದಂತೆ ಇಂತಹ ಕ್ಷಣಗಳೆಲ್ಲ ಒಂದರೊಡನೊಂದು ಬೆರೆತು, ನಮ್ಮ ಬದುಕಿನ ಅರ್ಥವನ್ನೂ, ನೆನಪುಗಳನ್ನೂ, ಸಂತೋಷವನ್ನೂ ಹೆಣೆಯುವ ಸುಂದರ ಬಟ್ಟೆಯಾಗುತ್ತವೆ.

    ಬಹುಶಃ ಸಂತೋಷವೆಂಬುದು ನಾವು ದೂರದಲ್ಲಿ ಹುಡುಕಬೇಕಾದ ಯಾವುದೋ ವಸ್ತುವಲ್ಲ.

    ನಮ್ಮ ಪ್ರತಿದಿನದ ಬದುಕಿನ ಸಣ್ಣ ಸಣ್ಣ ಮೂಲೆಗಳಲ್ಲಿ ಅದು ಈಗಾಗಲೇ ಮೌನವಾಗಿ ಚದುರಿಕೊಂಡಿರಬಹುದು — ನಾವು ಅದನ್ನು ಗಮನಿಸುವುದಕ್ಕಾಗಿ ಮಾತ್ರ ಕಾಯುತ್ತಿರಬಹುದು.

    ಹಾಗಾದರೆ, ಈ ಸಂಚಿಕೆಯಲ್ಲಿ ಸ್ವಲ್ಪ ನಿಧಾನವಾಗಿ ನಡೆಯೋಣ. ಸ್ವಲ್ಪ ಹತ್ತಿರದಿಂದ ನಮ್ಮ ಬದುಕನ್ನು ನೋಡೋಣ. ಸಾಮಾನ್ಯವೆಂದು ನಾವು ದಾಟಿಹೋಗುವ ಕ್ಷಣಗಳೊಳಗೆ ಅಡಗಿರುವ ಅಸಾಮಾನ್ಯ ಸೌಂದರ್ಯವನ್ನು ಮತ್ತೊಮ್ಮೆ ಕಂಡುಕೊಳ್ಳೋಣ.

    ದೊಡ್ಡ ವಿಚಾರಗಳು. ಸರಳವಾಗಿ.

    Mostra di più Mostra meno
    12 min
  • Episode 3 - Little Things That Add Up to a Long and Happy Life I English
    Oct 3 2026

    We often dream of changing our lives through grand gestures — a bold decision, a new beginning, or a dramatic transformation.

    But perhaps a beautiful life is not built in moments of grandeur.

    Perhaps it is woven quietly, one ordinary moment at a time.

    In this episode of The Simplified Scholar, we journey deeper into the world of Ikigai and explore the quiet power of the little things that fill our days.

    A morning walk. A conversation that warms the heart. A favourite song. A meal enjoyed without hurry. A hobby that makes us lose track of time. A small act of kindness. Something, however simple, that gives us a reason to look forward to tomorrow.

    None of these moments may seem extraordinary. Yet, gathered together over the years, they can become the very fabric of a meaningful life.

    Perhaps happiness is not always something we need to search for.

    Perhaps it is already scattered gently through our everyday lives — waiting for us to notice.

    So, in this episode, let us pause, look a little closer, and rediscover the extraordinary beauty hidden within the ordinary.

    Big Ideas. Made Simple.

    Mostra di più Mostra meno
    9 min
  • Episode 2 - ಚಟುವಟಿಕೆಯಿಂದಿರುವುದರ ಸಂತೋಷ I Kannada
    Sep 27 2026

    ನಮ್ಮ ಬದುಕಿನಲ್ಲಿ ಅರ್ಥಪೂರ್ಣವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದೇ ನಮ್ಮ ಸಂತೋಷಕ್ಕೆ ಒಂದು ಕಾರಣವಾಗಬಹುದೇ?

    The Simplified Scholarನ ಈ ಸಂಚಿಕೆಯಲ್ಲಿ, Ikigai: The Japanese Secret to a Long and Happy Life ಕೃತಿಯ ನಮ್ಮ ಪಯಣವನ್ನು ಮುಂದುವರಿಸುತ್ತಾ, ಸದಾ ಚಟುವಟಿಕೆಯಿಂದಿರುವುದು, ಬದುಕಿಗೆ ಒಂದು ಉದ್ದೇಶವಿರುವುದು ಮತ್ತು ಪ್ರತಿದಿನದ ಬದುಕಿನೊಂದಿಗೆ ಅರ್ಥಪೂರ್ಣವಾಗಿ ಬೆಸೆದುಕೊಂಡಿರುವುದರ ಮಹತ್ವವನ್ನು ಅರಿಯೋಣ.

    ‘Busy’ ಎಂದರೆ ಪ್ರತಿಕ್ಷಣವೂ ಕೆಲಸದಲ್ಲಿ ಮುಳುಗಿರುವುದಲ್ಲ. ಬದಲಾಗಿ, ಪ್ರತಿದಿನ ಬೆಳಿಗ್ಗೆ ನಮ್ಮನ್ನು ಎಬ್ಬಿಸುವಂತಹ ಒಂದು ಕಾರಣವಿರುವುದು — ನಮ್ಮ ದಿನಗಳಿಗೆ ಅರ್ಥವನ್ನು ನೀಡುವ, ನಮ್ಮನ್ನು ಬದುಕಿನೊಂದಿಗೆ ಸಕ್ರಿಯವಾಗಿ ಜೋಡಿಸುವ ಯಾವುದೋ ಒಂದು ಉದ್ದೇಶವಿರುವುದು.

    ಸರಳ ಉದಾಹರಣೆಗಳು, ಸಣ್ಣ ಕಥೆಗಳು ಮತ್ತು ಚಿಂತನೆಗಳ ಮೂಲಕ, ಅರ್ಥಪೂರ್ಣವಾದ ಚಟುವಟಿಕೆಗಳು ಹೇಗೆ ನಮ್ಮ ಬದುಕನ್ನು ಹೆಚ್ಚು ಸಂತೋಷಕರವಾಗಿಯೂ ಪರಿಪೂರ್ಣವಾಗಿಯೂ ಮಾಡಬಲ್ಲವು ಎಂಬುದನ್ನು ನೋಡೋಣ.

    🎙️ The Simplified Scholar — Big Ideas. Made Simple.

    📖 Ikigai: The Japanese Secret to a Long and Happy Life — Héctor García ಮತ್ತು Francesc Miralles ಅವರ ಕೃತಿಯನ್ನು ಆಧರಿಸಿ.

    Mostra di più Mostra meno
    12 min
  • Episode 2 - The Happiness of Being Busy I English
    Sep 27 2026

    Why do some people seem to find happiness simply by being engaged in meaningful things?

    In this episode of The Simplified Scholar, we continue our journey through Ikigai: The Japanese Secret to a Long and Happy Life and explore the idea of finding joy in staying active, purposeful, and connected to everyday life.

    Being busy is not about filling every moment with work. It is about having reasons to get up each morning — something that gives our days meaning and keeps us engaged with life.

    Through simple examples, stories, and reflections, we explore how purposeful activity can contribute to a happier and more fulfilling life.

    🎙️ The Simplified Scholar — Big Ideas. Made Simple.

    📖 Based on Ikigai: The Japanese Secret to a Long and Happy Life by Héctor García and Francesc Miralles.

    Mostra di più Mostra meno
    8 min